ಕನ್ನಡಿಗರ ಪ್ರಜಾನುಡಿ - Prajanudi आइकन

3.0 by Vivaan Web Technologies


Oct 10, 2018

ಕನ್ನಡಿಗರ ಪ್ರಜಾನುಡಿ - Prajanudi के बारे में

प्रजानुडी कर्नाटक के जिलों में वितरित एक कन्नड़ भाषा समाचार पत्र है

ಕನ್ನಡಿಗರ ‘ಪ್ರಜಾನುಡಿ’ ಇಂದಿನಿಂದ (ಸೆ.8) ಎಲ್ಲ ಪುಟಗಳು ವರ್ಣರಂಜಿತ ಮುದ್ರಣದೊಂದಿಗೆ ನಿಮ್ಮ ಕೈ ಸೇರುತ್ತಿದೆ. ಆಕರ್ಷಕ ಪುಟ ವಿನ್ಯಾಸ, ಎಲ್ಲದರಲ್ಲೂ ಹೊಸತನ ತುಂಬಿರುವ ಪತ್ರಿಕೆಯನ್ನು ಓದುಗರ ಮುಂದಿಡಬೇಕೆಂಬ ಬಹುದಿನದ ಹೆಬ್ಬಯಕೆಗೆ ಈಗ ಕಾಲ ಕೂಡಿಬಂದಿದೆ. ನಿಮ್ಮ ನುಡಿಯಾಗಿರುವ ‘ಪ್ರಜಾನುಡಿ’ ಇನ್ನು ಕೆಲವೇ ತಿಂಗಳಲ್ಲಿ 20ನೇ ವರ್ಷಕ್ಕೆ ಕಾಲಿಡಲಿದೆ. ಈ ನಿಮ್ಮ ಪತ್ರಿಕೆಯನ್ನು ಇಷ್ಟು ವರ್ಷ ಸಾಕಿ-ಸಲಹಿ ಬೆಳೆಸಿಕೊಂಡು ಬಂದಿರುವ ವಿಶಾಲ ಮನೋಭಾವದ ಸಹೃದಯದ ನಾಡಿನ ಜನತೆಗೆ ಹೃದಯ ತುಂಬಿದ ವಂದನೆಗಳು.

ಕಳೆದ ಮೇ ತಿಂಗಳು ವಿಧಾನಸಭೆ ಚುನಾವಣೆ ಎದುರಿಸಿದೆವು. ಆದರೆ ರಾಜ್ಯದ ಮತದಾರ ಪ್ರಭು ಯಾವುದೇ ರಾಜಕೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ. ಇದರ ಪರಿಣಾಮ ರಾಜ್ಯದಲ್ಲಿ ದೋಸ್ತಿ ಸರ್ಕಾರ ಆಡಳಿತದಲ್ಲಿದೆ.

ಈ ವರ್ಷದ ಮುಂಗಾರು ಆರಂಭದಲ್ಲಿ ರಾಜ್ಯದ ರೈತರಿಗೆ ಆಶಾಭಾವನೆ ತುಂಬಿ ಅಲ್ಪಸ್ವಲ್ಪ ಮಳೆಯಾಯಿತು. ಆದರೆ ಕರಾವಳಿ, ಪಶ್ಚಿಮಘಟ್ಟ ಹಾಗೂ ಕೊಡಗಿನಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರ ಜತೆಗೆ ಸುಮಾರು 13ಕ್ಕೂ ಹೆಚ್ಚು ಜಿಲ್ಲೆಗಳು ಮಳೆ ಅಭಾವದಿಂದ ಬರಗಾಲಕ್ಕೆ ತುತ್ತಾಗಿವೆ. ಅತಿವೃಷ್ಟಿ ಅನಾವೃಷ್ಟಿಯಿಂದ ಕರ್ನಾಟಕ ನಲುಗಿದೆ. ಹವಾಮಾನ ವೈಪರಿತ್ಯದಿಂದ ಒಕ್ಕಲುತನ ನೆಮ್ಮದಿ ಕಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಗತಕ್ಕೆ ಯತ್ನಿಸಿದೆ.

ಈ ಮಿಶ್ರ ಘಟನೆಗಳ ಮೇಲೆ ಸದಾ ಕಣ್ಣಿಟ್ಟು ಕಾಯುವ ಮಾಧ್ಯಮದ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಲೇ ಇದೆ. ದೃಶ್ಯ ಮಾಧ್ಯಮದ ಕ್ಷಣಕ್ಷಣ ಸ್ಫೋಟಕ ಸುದ್ದಿ ಪ್ರಭಾವ ಎಷ್ಟೇ ಪ್ರಬಲವಾಗಿದ್ದರೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆಗೆ ಕುಂದುಬಂದಿಲ್ಲ. ಅಚ್ಚಾಗುವ ಸುದ್ದಿ, ಛಾಯಾಚಿತ್ರ ಹಾಗೂ ಲೇಖನಗಳ ಬಗ್ಗೆ ಓದುಗರು ತಮ್ಮ ಅಭಿಪ್ರಾಯವನ್ನು ಪತ್ರ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ತಪ್ಪು- ಒಪ್ಪುಗಳನ್ನು ಗಮನಕ್ಕೆ ತರುತ್ತಾರೆ. ಹೀಗೆ ತಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯವನ್ನು ಹೇಳುತ್ತಲೇ ಬಂದಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಆರೋಗ್ಯಕರ ಬೆಳವಣಿಗೆ ಕನ್ನಡಿಗರಲ್ಲಿ ಹೆಚ್ಚುತ್ತಿರುವುದು ಹೆಮ್ಮೆಯ ವಿಚಾರ.

‘ಪ್ರಜಾನುಡಿ’ ದಿನಪತ್ರಿಕೆ ನಿಮ್ಮ ವಿಶ್ವಾಸ, ಪ್ರೀತಿಗೆ ಸ್ಪಂದಿಸಿ ನೀವು ನೀಡುತ್ತಿರುವ ಸಲಹೆ- ಸೂಚನೆಗಳನ್ನು ಪಾಲಿಸುತ್ತಾ ಬಂದಿದೆ. ನೀವು ಬಯಸುವ ಎಲ್ಲ ಸುದ್ದಿ, ಲೇಖನ ಹಾಗೂ ಇತರ ಮಾಹಿತಿ ನೀಡಲು ಇದುವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಇಂದಿನಿಂದ ವರ್ಣರಂಜಿತವಾಗಿ ಮುದ್ರಿತಗೊಂಡಿರುವ ಈ ನಿಮ್ಮ ನುಡಿ ಮುಂದಿನ ದಿನಗಳಲ್ಲಿ ತನ್ನ ಪುಟದ ಸಂಖ್ಯೆಗಳನ್ನು ಹೆಚ್ಚಿಸಿ ಇನ್ನಷ್ಟು ವಿಚಾರಗಳನ್ನು ವೈವಿಧ್ಯಮಯ ಪುಟವಿನ್ಯಾಸದೊಂದಿಗೆ ಹೊರತರುವ ಪ್ರಯತ್ನ ಮುಂದುವರೆಯುವುದು. ಇಂದು ಆರಂಭಿಸಿರುವುದು ಮೊದಲ ಹೆಜ್ಜೆ. ನಿಮ್ಮೆಲ್ಲರ ಶುಭ ಹಾರೈಕೆಯೊಂದಿಗೆ ನಾವು ಮುಂದೆ ಇಡುತ್ತಿರುವ ಹೆಜ್ಜೆಗೆ ಸಹಕರಿಸಿ, ಬೆಂಬಲಿಸುವಿರಿ ಎಂಬ ದೃಢ ವಿಶ್ವಾಸ ನಮಗಿದೆ.

ಮಾಧ್ಯಮ ಕ್ಷೇತ್ರಕ್ಕೆ ಈಗ ಕಾರ್ಪೋರೇಟ್ ವಲಯದ ಪಟ್ಟ ಬಂದಿದೆ. ಅಂದರೆ ಇದೂ ಕೂಡ ವ್ಯಾಪಾರದ ಅಂಗವಾಗಿದೆ ಎನ್ನುವ ಕಳಂಕ ಅಂಟಿಕೊಂಡಿದೆ, ನಿಜ. ಪ್ರತಿಭೆ, ಸಾಮಾಜಿಕ ಕಳಕಳಿ, ಸಭ್ಯತೆಯ ಪ್ರತೀಕವಾಗಿ ಬೆಳೆದಿರುವ ಮಾಧ್ಯಮ ಪ್ರಪಂಚ ಈಗ ಉದ್ದಿಮೆಯಾಗಿದೆ. ಅಷ್ಟೇ ಅಲ್ಲ ಆಕರ್ಷಕ ಉದ್ಯೋಗ ಸೃಷ್ಟಿಯ ಕ್ಷೇತ್ರವಾಗಿದೆ. ಪೈಪೋಟಿಯಲ್ಲಿ ಸಂಬಳ, ಸಾರಿಗೆ ಮತ್ತು ಸವಲತ್ತು ಇತರ ಕ್ಷೇತ್ರಗಳ ಗಮನ ಸೆಳೆದಿದೆ.

ಅದೇನೆ ಇರಲಿ, ‘ಪ್ರಜಾನುಡಿ’ ಪತ್ರಿಕೆಯನ್ನು ಪೋಷಿಸಿ ಬೆಳೆಸಿಕೊಂಡು ಬಂದಿರುವ ಮುದ್ರಕರು, ಪ್ರಕಾಶಕರು, ಮಾಲೀಕರು ಆಗಿರುವ ಜನಪ್ರಿಯ ಮಾಜಿ ಶಾಸಕ ಶ್ರೀ ವಾಸು ಅವರು ರಾಜ್ಯದ ಜನತೆಗೆ ಮೈಸೂರು ಮಾಜಿ ಮೇಯರ್ ಎಂದೇ ಚಿರಪರಿಚಿತರು. ರಾಷ್ಟ್ರೀಯ ಪಕ್ಷವೊಂದರ ಸಕ್ರಿಯ ಪ್ರತಿನಿಧಿಯಾಗಿದ್ದರೂ ಪತ್ರಿಕಾ ಸ್ವಾತಂತ್ರ್ಯದ ಅರಿವು ಅವರಿಗೆ ಬಾಲ್ಯದಿಂದಲೂ ಇದೆ. ಇದರಿಂದಾಗಿ ಸುದ್ದಿಮನೆ ವಿಚಾರದಲ್ಲಿ ಅವರು ತಮ್ಮ ಮೂಗು ತೂರಿಸುವ ಜಾಯಮಾನದವರಲ್ಲ. ಸಾಹಿತ್ಯ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗೆ ಪ್ರೋತ್ಸಾಹ, ನೆರವು ನೀಡುವ ಅಪರೂಪ ವ್ಯಕ್ತಿತ್ವದ ರಾಜಕಾರಣಿ. ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸದಾ ಭಾಗವಹಿಸಲು ಇಚ್ಛಿಸುವ ಅವರಿಗೆ ಸಾಮಾಜಿಕ ಕ್ಷೇತ್ರದ ಎಲ್ಲದರ ಅರಿವು ಪ್ರಜ್ಞೆ ಇದೆ. ಮೈಸೂರು ನಗರದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಅವರೊಬ್ಬ ‘ಮಾಹಿತಿ ಖಜಾನೆ’ ಇದ್ದಂತೆ. ಈ ಪತ್ರಿಕೆಯ ಈಗಿನ ಹೊಸತನದ ಹೊದಿಕೆಗೆ ಅವರದೇ ಪ್ರೋತ್ಸಾಹ.

ಸಾಮಾಜಿಕ ಕಳಕಳಿ, ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಸುದ್ದಿಗಳಿಗೆ ಒತ್ತು ಕೊಡುವ, ಈ ನಿಮ್ಮ ಪತ್ರಿಕೆ ಹೊಸತನದಿಂದ ಕೂಡಿ, ನಿಮ್ಮ ಕೈಗೆ ನಿತ್ಯವೂ ಸೇರಲಿದೆ. ಓದುಗರು, ಜಾಹೀರಾತುದಾರರು, ಏಜೆಂಟರು, ಪತ್ರಿಕಾ ವಿತರಕರು ತಮ್ಮ ಪ್ರೋತ್ಸಾಹವನ್ನು ಇದೇ ರೀತಿ ಮುಂದುವರಿಸಬೇಕೆಂದು ನಮ್ಮ ಬಯಕೆ. ನಿಮ್ಮ ಒಲವಿನ ಹಾರೈಕೆ ನಮಗಿರಲಿ.

ಡಿ. ಮಹಾದೇವಪ್ಪ

– ಸಂಪಾದಕ

नवीनतम संस्करण 3.0 में नया क्या है

Last updated on Oct 10, 2018

*Fixed Whatsapp share issue
*Fixed Google Ads

अनुवाद लोड हो रहा है...

अतिरिक्त ऐप जानकारी

नवीनतम संस्करण

निवेदन ಕನ್ನಡಿಗರ ಪ್ರಜಾನುಡಿ - Prajanudi अपडेट 3.0

द्वारा डाली गई

Ahmad

Android ज़रूरी है

Android 4.1+

अधिक दिखाएं

ಕನ್ನಡಿಗರ ಪ್ರಜಾನುಡಿ - Prajanudi स्क्रीनशॉट

टिप्पणी लोड हो रहा है...
भाषाओं
खोज हो रही है...
APKPure की सदस्यता लें
सर्वश्रेष्ठ एंड्रॉइड गेम और ऐप्स के शुरुआती रिलीज, समाचार और गाइड तक पहुंचने वाले पहले व्यक्ति बनें।
जी नहीं, धन्यवाद
साइन अप करें
सफलतापूर्वक सब्सक्राइब!
अब आप APKPure की सदस्यता ले रहे हैं।
APKPure की सदस्यता लें
सर्वश्रेष्ठ एंड्रॉइड गेम और ऐप्स के शुरुआती रिलीज, समाचार और गाइड तक पहुंचने वाले पहले व्यक्ति बनें।
जी नहीं, धन्यवाद
साइन अप करें
सफलता!
अब आप हमारे न्यूज़लेटर की सदस्यता ले चुके हैं।